ADs

ADs

ಕೇಸರಿ ಭಗವದ್ ಧ್ವಜವನ್ನು ಹಾಕುತ್ತೇವೆ ಎಂದು ಉಡಾಫೆ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ

 ಕುಣಿಗಲ್

ದೇಶದ ಕೇಂದ್ರ ಸ್ಥಾನವಾದ ದೆಹಲಿಯ ಕೆಂಪುಕೋಟೆಯ ಮೇಲೆ   ಕೇಸರಿ ಭಗವದ್ ಧ್ವಜವನ್ನು ಹಾಕುತ್ತೇವೆ ಎಂದು ಉಡಾಫೆ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಅವರನ್ನು  ಕೂಡಲೇ  ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು. 


ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ನೇತೃತ್ವದಲ್ಲಿ ನೂರಾರು ಜನ ಕಾಂಗ್ರೆಸ್ ಮುಖಂಡರು ತಾಲ್ಲೂಕು ಕಚೇರಿಯ ಮುಂದೆ ಸಮಾವೇಶಗೊಂಡು ರಾಜ್ಯ ಸರ್ಕಾರದ ಧೋರಣೆ ಖಂಡಿಸಿದ ಅವರು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಸಂವಿಧಸನ ವಿರೋಧಿ ಹೇಳಿಕೆ ನೀಡಿ ಇವರ ಕೇಸರಿ ಧ್ವಜಹಾಕುತ್ತೇವೆ ಎಂದು ಹೇಳುವ ಮೂಲಕ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ ಈಶ್ವರಪ್ಪ ಅವರು ಸಚಿವರಾಗಿ ಹೀಗೆ ಹೇಳಿಕೆ ನೀಡಿ ದೇಶದ ಏಕತೆಗೆ ದಕ್ಕೆ ತಂದಿದ್ದಾರೆ ಎಂದು ಖಂಡಿಸಿದರು. 

 ಪುರಸಭಾ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ಆರ್.ಎಸ್.ಎಸ್. ಸಂಘಟನೆಯ ಅಡಿಯಲ್ಲಿಯೇ ಕೆಲಸ ಮಾಡುವ ಬಿಜೆಪಿ ಸುಮಾರು ಎಂಭತ್ತು ವರ್ಷಗಳಿಂದಲೂ ಈ ರಾಷ್ಟ್ರದ ಧ್ವಜರಚನೆ ಸೇರಿದಂತೆ ಹಲವು ವಿಚಾರದಲ್ಲಿ ಖಂಡಿಸುತ್ತ ಬಂದಿದ್ದು ಇದೀಗ ಸಚಿವರೊಬ್ಬರಾದ ಈಶ್ವರಪ್ಪನವರು ಬಾಯಿ ಹರಿಬಿಟ್ಟು ಒಂದೇ ಧರ್ಮಕ್ಕೆ ಸೀಮಿತವಾದ ಆರ್.ಎಸ್.ಎಸ್.ನ ಭಾಗವದ್ ಧ್ವಜ ಹಾಕುವ ಮಾತುಗಳನ್ನು ಹಾಡುವ ಮೂಲಕ ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ ಕೂಡಲೇ ಇಂತಹ ಸಚಿವರು ಸಾರ್ವಜನಿಕ ಸೇವೆಗೆ ಅರ್ಹರಲ್ಲ ಎಂದು ಕಿಡಿಕಾರಿದರು. 

 ಪ್ರತಿಭಟನೆಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಲೋಹಿತ್   ಪುರಸಭಾ ಸದಸ್ಯರಾದ ರೂಪಿಣಿ 

ಜೈಲಕ್ಷ್ಮಿ, ಶ್ರೀನಿವಾಸ್,ಸದಾಖತ್, ಮುಖಂಡರಾದ ಶಂಕರ , ಹರೀಶ್ ಬೋರೇಗೌಡ, ಸುಂದ್ರಕುಪ್ಪೆ ಪಾಪಣ್ಣ, ಶಂಕರ್,  ನಾರಾಯಣ್,  ಮುಂತಾದವರು ಭಾಗವಹಿಸಿದ್ದರು.



Post a Comment

0 Comments