ADs

ADs

ರಾಜ್ಯ ಮಟ್ಟದಲ್ಲಿ ನಡೆಯುವ ನಾಟಕ ಸ್ಪರ್ಧೆಗೆ ಆಯ್ಕೆ

 ಕುಣಿಗಲ್ 

 ನಮ್ಮೂರಿಗೆ ಹೆಮ್ಮೆ ತರುವಂತಹ ವಿಷಯ. ನಮ್ಮ ಕುಣಿಗಲ್ #ಸರ್ಕಾರಿ_ಪ್ರಥಮ_ದರ್ಜೆ_ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ಒಡಲಾಳ ನಾಟಕ ತುಮಕೂರು ಜಿಲ್ಲೆಯ ನಾಟಕ ಸ್ಪರ್ಧೆಯಲ್ಲಿ ಗೆದ್ದು ಇಂದು ರಾಜ್ಯ ಮಟ್ಟದಲ್ಲಿ ನಡೆಯುವ ನಾಟಕ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ನಾಟಕವು ಅಲ್ಲಿಯೂ ಗೆದ್ದು ನಮ್ಮ ಕುಣಿಗಲ್ ಹೆಸರನ್ನ ವಿಶ್ವವ್ಯಾಪಿಯಾಗಿಸಲಿ ಎಂದು ನಮ್ಮ ಕುಣಿಗಲ್ ಜನತೆಯ ಪರವಾಗಿ ಅಭಿನಂದಿಸೋಣ

ಅಷ್ಟೇ ಅಲ್ಲದೇ ಈ ನಾಟಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರನ್ನು ಗುರುತಿಸಿಕೊಳ್ಳುವಂತೆ ಮಾಡಿದ #ಉಮಾಶ್ರೀಯವರಿಗೆ ಹೆಸರು ತಂದುಕೊಟ್ಟಂತ ನಾಟಕ ಕಂಡ್ರಿ ಇದು. ಅದೇ ನಾಟಕವನ್ನು ನಮ್ಮ ಕುಣಿಗಲ್ ಕಾಲೇಜು ಮಕ್ಕಳು ಅಭಿನಯಿಸುತ್ತಿರುವುದು ನಮ್ಮ ಕುಣಿಗಲ್ ಹೆಮ್ಮೆ. 

ಇದೇ ತಿಂಗಳು 15ನೇ ತಾರೀಖು ನಮ್ಮ ಕನ್ನಡ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ #ಶಂಕರ್‍ನಾಗ್ ಅವರ ಹೆಸರಿನಲ್ಲಿ ಕಟ್ಟಿರುವ ರಂಗಶಂಕರ ರಂಗಮಂದಿರದಲ್ಲಿ ನಮ್ಮ ಒಡಲಾಳ ನಾಟಕ ಪ್ರದರ್ಶಗೊಳ್ಳುತ್ತಿದೆ ಕಂಡ್ರಿ. ನಮ್ಮ ಕುಣಿಗಲ್ ಮಕ್ಕಳು ಅಭಿನಯಿಸುತ್ತಿರುವ ನಾಟಕಕ್ಕೆ ಕುಣಿಗಲ್‍ನವರಾದ ನಾವು ಹೋಗಲಿಲ್ಲ ಅಂದರೆ ಹೇಗೆ ಮಾರಾಯರೇ.. ಬನ್ರಿ, ಮಕ್ಕಳಿಗೆ ಶುಭಹಾರೈಕೆ ಮಾಡಿ ನಾಟಕ ನಾಟಕದ ಯಶಸ್ಸಿಗೆ ನಾವು ಕಾರಣವಾಗೋಣ. 

ಅದಲ್ಲದೇ ಇದೇ ತಿಂಗಳು 18ಕ್ಕೆ #ಶಿವಮೊಗ್ಗದಲ್ಲಿ ನಡೆಯುವ ನಾಟಕ ಸ್ಪರ್ಧೆಯಲ್ಲಿ ಗೆದ್ದು ನಮ್ಮ ಕುಣಿಗಲ್‍ಗೆ ಹೆಸರು ಅಲ್ಲಿಯೂ ಬೆಳಗಲಿ ಎಂಬುದು ಕಲಾಪೋಷಕರ ಆಶಯವಾಗಿದೆ.



Post a Comment

0 Comments