ADs

ADs

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಗ್ಗೆರೆ ಶ್ರೀ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ

 ಕುಣಿಗಲ್ 

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಗ್ಗೆರೆ ಶ್ರೀ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಸುಡುಬಿಸಿಲಿನಲ್ಲಿ ಯು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


ಪ್ರತಿವರ್ಷದಂತೆ ಈ ಬಾರಿಯೂ ಕಗ್ಗೆರೆ  ಶ್ರೀ  ಸಿದ್ದಲಿಂಗೇಶ್ವರ  ಕ್ಷೇತ್ರದ ರಥೋತ್ಸವವು  ಮಧ್ಯಾಹ್ನ 12_30 ಗಂಟೆಗೆ ಸಹಸ್ರಾರು ಭಕ್ತರು ಹಾಗೂ  ವಿವಿಧ ಮಠಗಳ  ಸ್ವಾಮೀಜಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.   ಬಾರಿ ಸುಡುಬಿಸಿಲಿನಲ್ಲಿ ತುಮಕೂರು, ಬೆಂಗಳೂರು, ಮೈಸೂರು, ನಾಗಮಂಗಲ, ಮಂಡ್ಯ, ಹಾಸನ ಸೇರಿದಂತೆ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾರತೋತ್ಸವಕ್ಕೆ ಆಗಮಿಸಿ ರಥರೂಢರಾದ ಶ್ರೀಗಳಿಗೆ ಬಾಳೆ ಹಣ್ಣು. ದವನ. ಹೂವು ಮೆಣಸು ಇತರೆ ಫಲ ಪುಷ್ಪವನ್ನು  ಎಸೆಯುವ. ಮೂಲಕ  ಜೈಘೋಷ ಕೂಗಿದರು.  

ಈ ಸಂದರ್ಭದಲ್ಲಿ ಯಡಿಯೂರು ಬಾಳೆಹೊನ್ನೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ.  ಅಂಗರಹಳ್ಳಿ ಬಾಲ ಮಂಜುನಾಥ ಸ್ವಾಮೀಜಿ, ಸನ್ನಿಧಿಗೆ ಭೇಟಿ ನೀಡಿದರು ಅದೇ ರೀತಿ ರಾಜ್ಯ ಪಿ.ಎಲ್ .ಡಿ .ಬ್ಯಾಂಕ್ ಅಧ್ಯಕ್ಷ ಡಿ. ಕೃಷ್ಣಕುಮಾರ್, ಬಿಜೆಪಿ ಮುಖಂಡ ಎಚ್ ಡಿ ರಾಜೇಶ್ ಗೌಡ ಮತ್ತು ಜೆಡಿಎಸ್ ಅಧ್ಯಕ್ಷ ಜಗದೀದೀಶ್  ತಹಸಿಲ್ದಾರ್ ಮಹಾಬಲೇಶ್ವರ್ ಅವರು ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರದ ಆಡಳಿತಾಧಿಕಾರಿಗಳು  ಸೇರಿದಂತೆ ಹಲವರು, ಭಾಗವಹಿಸುವ ಮೂಲಕ ರಥೋತ್ಸವ ವೀಕ್ಷಿಸಿ ಪುನೀತರಾದರು ಈ ಬಾರಿ  ಉದೆಮಿ ಕಗ್ಗೆರೆ ದಿನೇಶ್ ಅವರು ಹರಾಜಿನಲ್ಲಿ ಭಾಗವಹಿಸಿ ಒಂದು ಲಕ್ಷದ 13 ಸಾವಿರಕ್ಕೆ  ಕಳಶವನ್ನು ಕೂಗಿ ಪಡೆದರು. ಭಕ್ತರು ದಾರಿಯ ಉದ್ದಕ್ಕೂ ಅರವಂಟಿಗೆ ಮೂಲಕ  ನೀರು ಮಜ್ಜಿಗೆ, ಪಾನಕ ಕೊಸಂಬರಿ ಸೇರಿದಂತೆ ಅಲ್ಲಲ್ಲಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಭಕ್ತಾದಿಗಳು ಮಾಡಿದರು.




Post a Comment

0 Comments