ಕುಣಿಗಲ್
ವೈ.ಕೆ.ರಾಮಯ್ಯನವರ ಪರಿಶ್ರಮದಿಂದ ಆರಂಭಗೊಂಡಿದ್ದ ಕೇಂದ್ರೀಯ ರೇಷ್ಮೆ ಕಛೇರಿಯನ್ನು ಮುಚ್ಚಲ್ಪಟ್ಟಿದ್ದು ,ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದ ಹಿನ್ನೆಲೆಯಲ್ಲಿ ಮುಚ್ಚಿದ್ದ ಕಚೇರಿಯನ್ನು ಪುನರಾರಂಭಿಸಲು ಕೇಂದ್ರ ರೇಷ್ಮೆ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಮಾಜಿ ಸಂಸದ ಎಸ್.ಪಿ. ಮುದ್ದ ಹನುಮಗೌಡರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಣಿಗಲ್ ತಾಲೂಕಿನ ಬನ್ನಿಮರದ ಕಟ್ಟೆ ಹತ್ತಿರ ಚಿಕ್ಕ ಮಳಲವಾಡಿ ಹಾಗೂ ನಾಗನಹಳ್ಳಿಯಲ್ಲಿ 1986 ರಲ್ಲಿ ಮಾಜಿ ಮಂತ್ರಿ ದಿವಂಗತ ವೈ. ಕೆ. ರಾಮಯ್ಯ ರವರ ಪರಿಶ್ರಮ ದಿಂದ ಕೇಂದ್ರಿಯ ರೇಷ್ಮೆ ಮಂಡಳಿ ಯು ಆರಂಭಗೊಂಡು ರೇಷ್ಮೆ ಬೆಳೆಗಾರರ ನೆರವಿಗೆ ನಿಂತಿತ್ತು ಕಳೆದ 35 ವರ್ಷಗಳಿಂದ ಈ ಎರಡು ಕೇಂದ್ರಗಳು ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಹಾಗೂ ಮೂಲ ಮೈಸೂರು ಬಿತ್ತನೆ ಮೊಟ್ಟೆಗಳನ್ನು ಉತ್ಪಾದಿಸಿ ರೈತರ ನೆರವಿಗೆ ಸಹಾಯಹಸ್ತ ನೀಡಲಾಗಿತ್ತು. ರೈತಾಪಿ ಜನ ಗುಣಮಟ್ಟದ ರೇಷ್ಮೆ ಬೆಳೆದು ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡು ಆದಾಯವನ್ನು ಹೆಚ್ಚಿಸಿಕೊಂಡು ಜೀವನ ಸಾಗಿಸುತ್ತಿದ್ದರು, ಆದರೆ 2021ರ ರಲ್ಲಿ ಬನ್ನಿಮರ ಕಟ್ಟೆ ಹಾಗೂ ತೆರೆದಕುಪ್ಪೆ ನಾಗೇನಹಳ್ಳಿ ಯಲ್ಲಿ ನಡೆಯುತ್ತಿದ್ದ ಕೇಂದ್ರ ರೇಷ್ಮೆ ಕಚೇರಿಗಳನ್ನು ಕಾರಣಾಂತರದಿಂದ ಸರ್ಕಾರ ಸಂಪೂರ್ಣವಾಗಿ ಮುಚ್ಚಿಬಿಟ್ಟಿತು.
ಇದರ ವಿರುದ್ದ ರೈತಾಪಿಜನರು ಹಲವು ಬಾರಿ ನನ್ನಬಳಿ ಅಳಲೊತ್ತುಕೊಳ್ಳುತ್ತಿದ್ದರು ಅಲ್ಲದೆ ಈ ಪ್ರದೇಶದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಆಸ್ತಿ ಅತ್ಯಂತ ಬೆಲೆ ಬಾಳುವ ಜಮೀನು ಇದಾಗಿದ್ದು ಪಾಳುಬಿದ್ದು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಜೊತೆಗೆ ಇದರಲ್ಲಿದ್ದ ಬೆಲೆ ಬಾಳುವ ಚಿರಾಸ್ತಿ ಗಳ ನಷ್ಟವಾಯಿತು ರೇಷ್ಮೆ ಬೆಳೆಗಾರರು ಮತ್ತು ನೌಕರರು ಸಂಕಷ್ಟ ಸ್ಥಿತಿಗೆ ಒಳಗಾದರೂ ನೌಕರರನ್ನು ಕೇರಳ ತಮಿಳುನಾಡು, ಪ್ರದೇಶಗಳಿಗೆ ವರ್ಗಾಯಿಸಿದರು ಅವರ ಕಷ್ಟ ನೋವು ಹೇಳತೀರದಾಯಿತು, ಇಂತಹ ವ್ಯವಸ್ಥೆ ಪಾಳು ಬೀಳುವ ಮೂಲಕ ದಿವಂಗತ ಕೆ ರಾಮಯ್ಯ ಅವರ ಪರಿಶ್ರಮದ ಸಂಸ್ಥೆಯನ್ನು ಉಳಿಸಿಕೊಳ್ಳಲು ಮಾಡಿದಂತಹ ಎಲ್ಲ ಪ್ರಯತ್ನಗಳು ವಿಫಲಗೊಂಡಿದ್ದವು ಜೊತೆಗೆ ಎರಡು ಕೇಂದ್ರ ರೇಷ್ಮೆ ಮಂಡಳಿ ಕಚೇರಿಗಳನ್ನು ಮುಚ್ಚಲ್ಪಟ್ಟಿತ್ತು ರೇಷ್ಮೆ ಬೆಳೆಗಾರರು ನೌಕರರು ತಮ್ಮನ್ನು ಭೇಟಿ ಮಾಡಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ರಂಜಿತ ರಂಜನ್ ವೊಕಾಡಿಯರ್ ಮತ್ತು ನಿರ್ದೇಶಕರಾದ ಡಾ. ವಿ. ಶಿವಪ್ರಸಾದ್ ಅವರನ್ನು ಭೇಟಿ ಮಾಡಿ ರೈತರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸಿ ಸರ್ಕಾರದ ಆಸ್ತಿ ಉಳಿಸುವ ನಿಟ್ಟಿನಲ್ಲಿ ಆರಂಭಿಸಬೇಕೆಂದು ಮನವಿ ಮಾಡಿದ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಈ ಪ್ರದೇಶದಲ್ಲಿರುವ ಬೆಲೆ ಬಾಳುವ ಆಸ್ತಿ ಉಳಿಸುವುದರ ಜೊತೆಗೆ ದಿವಂಗತ ವೈ. ಕೆ.ರಾಮಯ್ಯನವರ ಪರಿಶ್ರಮದಿಂದ ಆರಂಭಗೊಂಡಿದ್ದ ಈ ಎರಡು ಕೇಂದ್ರ ರೇಷ್ಮೆ ಕಚೇರಿಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದಾರೆ ರೇಷ್ಮೆ ಬೆಳೆಗಾರರಿಗೆ , ನೌಕರರಿಗೆ ಅನುಕೂಲವಾಗುವ ಮತ್ತು ಬೆಲೆ ಬಾಳುವ ಆಸ್ತಿಗಳನ್ನು ಉಳಿಸುವ ಹಾಗೂ ವೈ.ಕೆ.ರಾಮಯ್ಯನವರ ಪರಿಶ್ರಮದ ಕೊಡುಗೆ ಮತ್ತೆ ಉಳಿಸಿ ಬೆಳೆಸುವ ಕೆಲಸವನ್ನು ಮಾಡಿದ ಮೇಲಿನ ಅಧಿಕಾರಿಗಳಿಗೆ ಕುಣಿಗಲ್ ರೇಷ್ಮೇ ಬೆಳೆಗಾರರ ಪರವಾಗಿ ಅಭಿನಂದಿಸುತ್ತೇನೆ ಎಂದ ಅವರು ಈ ಭಾಗದ ಕೇಂದ್ರ ರೇಷ್ಮೆ ಮಂಡಳಿಯ ಬೆಲೆಬಾಳುವ ಚಿರಾಸ್ತಿ ಚರಾಸ್ತಿಗಳು ಮುದ್ದು ಕಂಡವರ ಪಾಲಾಗದೆ ಸಂರಕ್ಷಣೆಯಾಗುತ್ತದೆ ಎಂದರು.
0 Comments