#ನ್ಯಾಯಾಧೀಶರಾದ_ಮಲ್ಲಿಕಾರ್ಜುನ ಗೌಡ ಎಂಬುವವರು ಗಣರಾಜ್ಯೋತ್ಸವ ಆಚರಣೆಯ ವೇಳೆ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿ ಅವಮಾನಿಸಿ ರುವುದನ್ನು ಕುಣಿಗಲ್ ತಾಲ್ಲೂಕು ಅಹಿಂದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಅಪಾರ ಅಹಿಂದ ವರ್ಗದ ಅಭಿಮಾನಿಗಳು ಕುಣಿಗಲ್ ಪಟ್ಟಣದ ಹುಚ್ಚು ಮಾಸ್ತಿ ಗೌಡರ ವೃತ್ತದಲ್ಲಿ ನ್ಯಾಯಾಧೀಶರ ವರ್ತನೆಯನ್ನು ಖಂಡಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ವೈ-ಎಚ್ ಹುಚ್ಚಯ್ಯ, ಕುಣಿಗಲ್ ತಾಲ್ಲೂಕು ಅಹಿಂದ ಅಧ್ಯಕ್ಷ ಹಾಗೂ ಪುರಸಭೆ ಅಧ್ಯಕ್ಷ ರಂಗಸ್ವಾಮಿ ದಲಿತ ಮುಖಂಡರಾದ ವರದರಾಜು ಶಿವಶಂಕರ್ ರಾಮಚಂದ್ರಯ್ಯ ಎಸ್.ಆರ್ ಚಿಕ್ಕಣ್ಣ, ನಾರಾಯಣ್ ಗುರುಚರಣ್ ಸಿಂಗ್ ದಲಿತ ನಾರಾಯಣ್ ಕೃಷ್ಣಪ್ಪ ಆನಂದ್ ಉದಯ್ ಕುಮಾರ್ ದಿನೇಶ್ ಕುಮಾರ್ ನರಸಿಂಹ ಕೆ ಎನ್. ಲೋಕೇಶ್, ಸಿದ್ದಲಿಂಗಸ್ವಾಮಿ ರವೀಂದ್ರಕುಮಾರ್ ಮುಂತಾದವರು ಭಾಗವಹಿಸಿ ಈ ಘಟನೆಯನ್ನು ಖಂಡಿಸಿದರು.
0 Comments