ADs

ADs

ಸುಮಾರು 2.65 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ

 ಸುಮಾರು 2.65 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ

ಕುಣಿಗಲ್

ಸುಮಾರು 2.65 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗುತ್ತಿದ್ದು ಕಾಂಪೌಂಡ್ ಸೇರಿದಂತೆ ರಸ್ತೆ ಅಭಿವೃದ್ಧಿಗೆ ಸರ್ಕಾರದ ಅನುದಾನದಿಂದ ವಿಳಂಬವಾಗಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕರ ಸೇವೆಗೆ ಸುಸಜ್ಜಿತವಾದ ವಿದ್ಯುತ್ ಚಿತಾಗಾರ ವನ್ನು ಸಮರ್ಪಿಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಅವರು ಇಂದು ಕುಣಿಗಲ್ ಪಟ್ಟಣದ ಕುಂಬಾರ ಗುಂಡಿಯಲ್ಲಿ ಕಳೆದ ಎರಡು ವರ್ಷದಿಂದ ಸುಮಾರು 2. 65 ಕೋಟಿ ವೆಚ್ಚದಲ್ಲಿ ರಾಮನಗರದ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುತ್ತಿರುವ ಆಧುನಿಕ ವಿದ್ಯುತ್ ಚಿತಾಗಾರ ವನ್ನು ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ ಅನುದಾನದ ಕೊರತೆ ಇರುವುದರಿಂದ ಇಲ್ಲಿಗೆ ಬರವ ರಸ್ತೆ ಅಭಿವೃದ್ಧಿ ಮತ್ತು ಚಿತಾಗಾರದ ಸುತ್ತ ಕಾಂಪೌಂಡ್ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನದ ಕೊರತೆ ಉಂಟಾಗಿದೆ. ಅಲ್ಲದೆ ಹಿಂದೆ ಮಂಜೂರಾಗಿದ್ದ ಸುಮಾರು 5 ಕೋಟಿ ರೂ. ಸರ್ಕಾರ ಕೋರೋನ ರೋಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಡೆ ಹಿಡಿಯಲಾಗಿದೆ ಮುಂದಿನ ದಿನಗಳಲ್ಲಿ ಬರುವ ಅನುದಾನವನ್ನು ಅತ್ಯಗತ್ಯ ಯೋಜನೆಗಳಿಗೆ ಬಳಸುವ ಮೂಲಕ ರಸ್ತೆ ಕಾಮಗಾರಿಗಳ ಅಭಿವೃದ್ಧಿ ಪಟ್ಟಣದಲ್ಲಿ ಚರಂಡಿ ಒಳಚರಂಡಿ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಅಭಿವೃದ್ಧಿಗಳಿಗೆ ಒತ್ತು ಕೊಡಲಾಗುತ್ತದೆ ಎಂದವರು ಶೀಘ್ರದಲ್ಲಿ ಉಳಿದ ಕಾಮಗಾರಿ ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ನೀಡಲು ಕ್ರಮ ವಹಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಡಾ. ರಂಗನಾಥ್, ಪುರಸಭಾ ಅಧ್ಯಕ್ಷ ರಂಗಸ್ವಾಮಿ, ತಹಸಿಲ್ದಾರ್ ಮಹಾಬಲೇಶ್ವರ್ ನಿರ್ಮಿತಿ ಕೇಂದ್ರದ ಗೋವಿಂದರಾಜು, ಕರಿಯಪ್ಪ. ಪುರಸಭಾ ಸದಸ್ಯರಾದ ದೇವರಾಜ್ ಎಸ್.ಕೆ.ನಾಗೇಂದ್ರ , ಅರುಣ್ ಕುಮಾರ್, ಮಂಜುಳಾ ರಂಗಪ್ಪ , ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.



Post a Comment

0 Comments